ಸಡಗರ ಸಂಭ್ರಮದಿಂದ ಜರುಗಿದ ಮೊಹರಂ ಉತ್ಸವ
ಶಿವಾಪೂರ(ಹ): ಹಿಂದೂ ಮುಸ್ಲಿಂ ಭಾವೈಕ್ಯದ ಪ್ರತೀಕವಾದ ಮೊಹರಂ ಹಬ್ಬವು ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಅಮಾವಾಸ್ಯೆ ಆದ ಮೂರು ದಿನಗಳ ನಂತರ ಗ್ರಾಮದ ಹಿರಿಯರ,ಯುವಕರ ಸಮ್ಮುಖದಲ್ಲಿ ಗುದ್ದಲಿ ಪೂಜೆ ಸಲ್ಲಿಸಿ ಹನ್ನೊಂದು ದಿನಗಳ ಕಾಲ ನಡೆಯುವ ಈ ಮೊಹರಂ ಹಬ್ಬದಲ್ಲಿ ಕಿಚ್ಚು ಹಾಯಿವುದು,ಪಕಿರ ಆಗುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಜಾತಿ ಜನಾಂಗದವರು ಮೊಹರಂ ಹಬ್ಬದ ಕಾರ್ಯಕ್ರಮಗಳಲ್ಲಿ ಬಾಗಿಯಾಗಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಆಗುವರು, ಮೊಹರಂ ಹಬ್ಬದ ಕೊನೆಯ ದಿನವಾದ ಭಾನುವಾರದಂದು ಅಲಂಕೃತಗೊಂಡ ಮೊಹರಂ ದೇವರ ಡೋಲಿಯನ್ನು ವಿವಿದ ವಾದ್ಯ ಮೇಳ,ಹೆಜ್ಜೆ ಮೇಳ ಕುಣಿತದೊಂದಿಗೆ ಮೆರವಣಿಗೆ ನಡೆಸಿ ಸಂಭ್ರಮದಲ್ಲಿ ದೇವರು ಹೋಳಿಗೆ ಹೋಗುವ ಮೂಲಕ ಮೊಹರಂ ಹಬ್ಬವು ಮುಕ್ತಾಯಗೊಂಡಿತು. ವರದಿ ಬ್ರಹ್ಮಾನಂದ ಪತ್ತಾರ.
ಶಿವಾಪುರ(ಹ):ಸಡಗರ ಸಂಭ್ರಮದಿಂದ ಜರುಗಿದ ಮೊಹರಂ ಉತ್ಸವ
[td_block_social_counter facebook="tagdiv" twitter="tagdivofficial" youtube="tagdiv" style="style8 td-social-boxed td-social-font-icons" tdc_css="eyJhbGwiOnsibWFyZ2luLWJvdHRvbSI6IjM4IiwiZGlzcGxheSI6IiJ9LCJwb3J0cmFpdCI6eyJtYXJnaW4tYm90dG9tIjoiMzAiLCJkaXNwbGF5IjoiIn0sInBvcnRyYWl0X21heF93aWR0aCI6MTAxOCwicG9ydHJhaXRfbWluX3dpZHRoIjo3Njh9" custom_title="Stay Connected" block_template_id="td_block_template_8" f_header_font_family="712" f_header_font_transform="uppercase" f_header_font_weight="500" f_header_font_size="17" border_color="#dd3333"]