Thursday, July 17, 2025
spot_img

ಬೆಳಗಾವಿ :ಡಿ ದರ್ಜೆ ನೌಕರ ಶೋಭಾ ರಾಚೋಟಿ ಮೇಲೆ ಚಪ್ಪಲಿ ಸೇವೆ,ದರ್ಪ,ದೌರ್ಜನ್ಯ,ತೋರಿದ ನರ್ಸ್ ಸುಗಂಧಾ

  1. ಬೆಳಗಾವಿ :ಡಿ ದರ್ಜೆ ನೌಕರ ಶೋಭಾ ರಾಚೋಟಿ ಮೇಲೆ ಚಪ್ಪಲಿ ಸೇವೆ , ದರ್ಪ, ದೌರ್ಜನ್ಯ, ತೋರಿದ ನರ್ಸ್ ಸುಗಂಧಾ ಹೌದು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಹಾಗೂ ಆಯಾ ನಡುವೆ ರೋಗಿಗಳಿಗೆ ಊಟ ಪೂರೈಸುವ ವಿಷಯದಲ್ಲಿ ವಾಗ್ವಾದ ನಡೆದು ಗಲಾಟೆ ತಾರಕ್ಕಕ್ಕೆರಿ ಚಪ್ಪಲಿ ಸೇವೆ ಮಾಡುತ್ತೇನೆಂದು ಅವಾಚ್ಯವಾಗಿ ಬೈದು ಡಿ ದರ್ಜೆ ನೌಕರಿ ಶೋಭಾಗೆ ದರ್ಪ ಹಾಗೂ ಅವಾಜ್ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಈ ವಿಷಯದ ಕುರಿತು ಆಯಾ ಕೆಲಸ ಮಾಡುವ ಶೋಭಾ ಸಿವಿಲ್ ಆಸ್ಪತ್ರೆಯಲ್ಲಿ ರೂಮ್ ನಂಬರ್ 1 ಹಾಗೂ ಆಸ್ಪತ್ರೆಯ ಅನೇಕ ಹಿರಿಯ ಅಧಿಕಾರಿಗಳ್ ಮುಂದೆ ಅಳಲು ತೋಡಿಕೊಂಡಿದ್ದಾಳೆ. ಇನ್ನೂ ಜೋರಾದ ಧ್ವನಿಯಲ್ಲಿ ಅಳುತ್ತ ಬರುತ್ತಿರುವ ಅಜ್ಜಿ ಆಯಾ ಶೋಭಾ ರಾಚೋಟಿ ಪೂರ್ತಿ ದಿನವೆಲ್ಲ ಅಳುತ್ತ ಗೋಗರೆಯುತ್ತಾ ತನ್ನ ಕಷ್ಟವನ್ನ ಜೋರಾದ ಧ್ವನಿಯಲಿ ಅಳುತ್ತಾ ಆಸ್ಪತ್ರೆಯಲ್ಲಿ ರೋಗಿಗಳ ವಾರ್ಡ್ ನಲ್ಲೆ ಅಳುತ್ತಾ ಸುಗಂದಾ ನರ್ಸ್ ವಿರುದ್ದ ಕಿಡಿಕಾರುತ್ತ ಮೇಲಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಕ್ರಮ ಕೈಗೊಳ್ಳದೆ ಆಯಾ ಶೋಭಾ ಗೆ ಮಾನವೀಯತೆ ಇಲ್ಲದ ತರಾ ನಿದರ್ಶನ ತೋರಿದ್ದಾರೆ. ಇನ್ನೂ ಅಜ್ಜಿ ಶೋಭಾಗೆ ಆದ ತೊಂದರೆ ಹಾಗೂ ಅಳಲನ್ನು ವಿಡಿಯೋ ದಲ್ಲಿ ನೋಡಬಹುದು.ಡಿ ದರ್ಜೆ ನೌಕರರ ಮೇಲೆ ಆಗುತ್ತಿರುವ ದರ್ಪ ದೌರ್ಜನ್ಯದಿಂದ ಬೇಸತ್ತು ನೌಕರಿಗೆ ರಾಜೀನಾಮೆ ನೀಡುತ್ತೇನೆ ನಾನೇಕೆ ಇನ್ನೊಬ್ಬರಿಂದ ಅವಾಚ್ಯವಾಗಿ ಬೆಯ್ಯಿಸಿಕೊಳ್ಳಬೇಕು ನಾವು ದುಡಿದು ತಿನ್ನೋರು ನಮ್ಮ್ ಮೇಲೆ ಯಾಕೆ ಈ ದರ್ಪ ದೌರ್ಜನ್ಯ ನನಗೆ ನರ್ಸ್ ಸುಗಂಧಾ ಚಪ್ಪಲಿ ಯಿಂದ್ ಹೊಡಿಯುತ್ತೆನೆಂದು ವಾರ್ಡ್ ನಲ್ಲೆ ಅವಮಾನ ಮಾಡಿದ್ದಾಳೆ ಎಂದು ನರ್ಸ್ ಅಧಿಕಾರಿಗಳ ಮುಂದೆ ಗೊಳೋ ಅಂತ ಅತ್ತ ಘಟನೆ ನಡೆದಿದೆ ದೃಶ್ಯಾವಳಿಗಳನ್ನ ಗಮನಿಸಿದರೆ ಈ ಅಜ್ಜಿಗೆ ಆದ್ ಅಪಮಾನ ಅವಮಾನ ಕುರಿತು ಚಪ್ಪಲಿಯಿಂದ್ ಹೊಡಿಯುತ್ತೇನೆ ಎಂದ ಸಿಬ್ಬಂದಿ ನರ್ಸ್ ಸುಗಂಧಾ ವಿರುದ್ದ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಎಂದು ಅಜ್ಜಿ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾಳೆ ಇನ್ನೂ ಈ ಘಟನೆ ಕುರಿತು ಅನೇಕ ಸಂಘಟನೆಗಳು ಪ್ರತಿಭಟನೆ ಮೂಲಕ ಡಿ ದರ್ಜೆ ನೌಕರರಿಗೆ ಆದ್ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಸಂಘಟನೆ ಅಧ್ಯಕ್ಷರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇನ್ನೂ ಚಪ್ಪಲಿ ಯಿಂದ ಹೊಡುಯುತ್ತೇನೆ ಎಂದ ನರ್ಸ್ ನನ್ನು ಅಮಾನತು ಮಾಡಬೇಕೆಂದು ಅಜ್ಜಿ ಆಯಾ ಶೋಭಾ ರಾಚೋಟಿ ಮಾಧ್ಯಮದ ಮುಂದೆ ಮಾಹಿತಿ ನೀಡಿದ್ದಾರೆ. ಇನ್ನೂ ದಿನೇ ದಿನೇ ಈ ನರ್ಸ್ ಡಿ ದರ್ಜೆ ನೌಕರರಿಗೆ ದರ್ಪ ತೋರುತ್ತಾಳೆಂದು ಶೋಭಾ ರಾಚೋಟಿ ಮಾಧ್ಯಮದ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಇನ್ನೂ ಜಿಲ್ಲಾ ಆಸ್ಪತ್ರೆಯ ಮೇಧಿಕಾರಿಗಳ ಹತ್ತಿರ ಕೂಡಾ ಅಳಲು ತೋಡಿಕೊಂಡಿದ್ದಾಳೆ. ಇನ್ನೂ ಇಂತಹ ದರ್ಪ ದೌರ್ಜನ್ಯದ ವಿರುದ್ದ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸೂಕ್ತ ಕಾನೂನಿನ ಕ್ರಮ ಕೈಗೊಂಡು ತಪ್ಪಿತಸ್ತರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಿದೆ. ವರದಿ ಬ್ರಹ್ಮಾನಂದ ಪತ್ತಾರ ರಾಜಕೀಯ ಮೌಲ್ಯ ಪ್ರಾದೇಶಿಕ ದಿನಪತ್ರಿಕೆ ಬೆಳಗಾವಿ ಜಿಲ್ಲಾ ವರದಿಗಾರರು ಹಾಗೂ ಸೂಪರ್ ನ್ಯೂಸ್ ಜಿಲ್ಲಾ ವರದಿಗಾರ.

Related Articles

LEAVE A REPLY

Please enter your comment!
Please enter your name here

[td_block_social_counter facebook="tagdiv" twitter="tagdivofficial" youtube="tagdiv" style="style8 td-social-boxed td-social-font-icons" tdc_css="eyJhbGwiOnsibWFyZ2luLWJvdHRvbSI6IjM4IiwiZGlzcGxheSI6IiJ9LCJwb3J0cmFpdCI6eyJtYXJnaW4tYm90dG9tIjoiMzAiLCJkaXNwbGF5IjoiIn0sInBvcnRyYWl0X21heF93aWR0aCI6MTAxOCwicG9ydHJhaXRfbWluX3dpZHRoIjo3Njh9" custom_title="Stay Connected" block_template_id="td_block_template_8" f_header_font_family="712" f_header_font_transform="uppercase" f_header_font_weight="500" f_header_font_size="17" border_color="#dd3333"]
- Advertisement -spot_img

Latest Articles