ಬೆಳಗಾವಿ:ಮಟ್ಕಾ ಬುಕ್ಕಿಗೆ ಗಡಿಪಾರು ಆದೇಶ ನೀಡಿದ ಪೊಲೀಸ್ ಆಯುಕ್ತ ಬೊರಸೆ.ನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಜಾವೇದ ಮೊಹಮ್ಮದ ಶೇಖ ಎಂಬ ವ್ಯಕ್ತಿಯ ವಯಸ್ಸು:50 ವರ್ಷ, ಮನೆ ನಂ-212, ನೂರಾನಿಗಲ್ಲಿ, ನ್ಯೂಗಾಂಧಿನಗರ ಬೆಳಗಾವಿ. ಎಂಬುವವನು ವಿವಿಧ ಅಕ್ರಮ ಚಟುವಟಿಕೆಗಳಾದ ಮಟಕಾ ಜೂಜಾಟ ಹಾಗೂ ಸಮಾಜಘಾತುಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ, ಅಲ್ಲದೇ ಸದರಿಯವನ ಮೇಲೆ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 08 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 05 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಇರುತ್ತದೆ. ಮಾಳಮಾರುತಿ ಪೊಲೀಸ್ ಠಾಣೆಯ ಶ್ರೀ ಜೆ. ಎಂ. ಕಾಲಿಮಿರ್ಚಿ ಪಿಐ, ಶ್ರೀ ಹೊನ್ನಪ್ಪಾ ತಳವಾರ ಪಿಎಸ್‌ಐ ಮತ್ತು ಶ್ರೀ ಕೆ. ಬಿ. ಗೌರಾಣಿ ಸಿಎಚ್‌ಸಿ-1157, ರವರುಗಳ ತಂಡವು ಗಡಿಪಾರು ಪ್ರಸ್ತಾವಣೆಯನ್ನು ತಯಾರಿಸಿ, ಶ್ರೀ ಎಸ್.ಡಿ. ಸತ್ಯನಾಯ್ಕ, ಎಸಿಪಿ ಮಾರ್ಕೇಟ ರವರ ಅನುಮೋದನೆಯೊಂದಿಗೆ ಪೊಲೀಸ್ ಆಯುಕ್ತರ ಕಛೇರಿಗೆ ಪ್ರಸ್ತಾವಣೆ ಸಲ್ಲಿಸಿದ್ದು, ಶ್ರೀ ಬೊರಸೆ ಭೂಷಣ್ ಗುಲಾಬರಾವ್, ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ, ಗಡಿಪಾರು ಪ್ರಸ್ತಾವಣೆಯನ್ನು ಶ್ರೀ ರೋಹನ್ ಜಗದೀಶ್ ಐ.ಪಿ.ಎಸ್, ಉಪ ಪೊಲೀಸ್ ಆಯಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಬೆಳಗಾವಿ ನಗರ ರವರು ಗಡಿಪಾರು ನ್ಯಾಯಾಂಗ ವಿಚಾರಣೆಯನ್ನು ಕೈಕೊಂಡು, ದಿನಾಂಕ:10/07/2025 ರಂದು ಆರೋಪಿತನನ್ನು ಉಡುಪಿ ಜಿಲ್ಲೆಯ ಕುಂದಾಪೂರ ಠಾಣೆ ವ್ಯಾಪ್ತಿಗೆ 06 ತಿಂಗಳ ಅವಧಿಗೆ ಗಡಿಪಾರು ಆದೇಶ ಹೊರಡಿಸಿರುತ್ತಾರೆ.ವರದಿ ಬ್ರಹ್ಮಾನಂದ ಪತ್ತಾರ.
[td_block_social_counter facebook="tagdiv" twitter="tagdivofficial" youtube="tagdiv" style="style8 td-social-boxed td-social-font-icons" tdc_css="eyJhbGwiOnsibWFyZ2luLWJvdHRvbSI6IjM4IiwiZGlzcGxheSI6IiJ9LCJwb3J0cmFpdCI6eyJtYXJnaW4tYm90dG9tIjoiMzAiLCJkaXNwbGF5IjoiIn0sInBvcnRyYWl0X21heF93aWR0aCI6MTAxOCwicG9ydHJhaXRfbWluX3dpZHRoIjo3Njh9" custom_title="Stay Connected" block_template_id="td_block_template_8" f_header_font_family="712" f_header_font_transform="uppercase" f_header_font_weight="500" f_header_font_size="17" border_color="#dd3333"]