ಬೆಳಗಾವಿ:ಪೊಲೀಸರ ವರ್ಗಾವಣೆಗಳಲ್ಲಿ ಪಾರದರ್ಶಕ ಮರೆತ ಮೇಲಾಧಿಕಾರಿಗಳು.ಹೌದು ರಾಜ್ಯದಲ್ಲಿ ಈಗಾಗಲೇ ಐದು ವರ್ಷಗಳ ಸೇವೆಯನ್ನು ಒಂದೇ ಠಾಣೆಯ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಈ ಸ್ಥಳದಲ್ಲಿ ಕರ್ತವ್ಯ ಪೂರೈಸಿರುವ ಪೋಲಿಸ್ ಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್ಟೇಬಲ್ ಎಎಸ್ಐ ರವರುಗಳ ಕನಿಷ್ಠ ಮತ್ತು ಗರಿಷ್ಟ ಅವಧಿಯನ್ನು ನಿಗದಿಪಡಿಸಿ ವರ್ಗಾವಣೆ ಮಾಡಲು ಗೃಹ ಸಚಿವರ ಸೂಚನೆ ನೀಡಿದ್ದಾರೆ. ಆದರೆ ಬೆಳಗಾವಿ ಜಿಲ್ಲಾ ಪೋಲಿಸ್ ಇಲಾಖೆಯಲ್ಲಿ ಈಗಾಗಲೇ ವರ್ಗಾವಣೆ ವಿಚಾರದಲ್ಲಿ ಪಾರದರ್ಶಕತೆ ಮರೆತು ಅನುಕೂಲಕ್ಕೆ ತಕ್ಕಂತೆ ವರ್ಗಾವಣೆ ಮಾಡಿ ಆದೇಶ ನೀಡಿದ್ದಾರೆ ಹೀಗಾಗಿ ಪೊಲೀಸ್ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್, ಎ ಎಸ್ ಐ, ಹೀಗೆ ಅನೇಕ ಪೊಲೀಸರಿಗೆ ವರ್ಗಾವಣೆ ತಕ್ಕಡಿ ತಪ್ಪಿ ಹೋಗಿದೆ, ಐದು ವರ್ಷ ಒಂದೆ ಠಾಣೆಯಲ್ಲಿ ಟಿಕಾಣಿ ಹೂಡಿದ ಪೊಲೀಸರನ್ನ ಬೇರೆ ಠಾಣೆಗೆ ವರ್ಗಾವಣೆ ಮಾಡಬೇಕಿತ್ತು ಆದರೆ ಜನರಲ್ ವರ್ಗಾವಣೆಯಲ್ಲಿ ಒಳಗೆ ಕರಿಯದೆ ಕೌನ್ಸಲಿಂಗ್ ಮಾಡದೆ ಅದೇ ಠಾಣೆಯಲ್ಲಿ ಮುಂದುವರೆದ ಅನೇಕ ಪೊಲೀಸರಿದ್ದಾರೆ, ಓ ಓ ಡಿ ಆಧಾರದ ಮೇಲೆ ಅದೇ ಠಾಣೆಗಳಿಗೆ ಸ್ಥಳ ನಿಯುಕ್ತಿ ಗೊಳಿಸಿ ಅಲ್ಲೇ ಟಿಕಾಣಿ ಹೂಡಿದ ಅನೇಕ ಪೊಲೀಸರಿದ್ದಾರೆ. ಹೀಗಾಗಿ ಪೋಲಿಸ್ ಇಲಾಖೆಯಲ್ಲಿ ಕೆಲ ಪೊಲೀಸರಿಗೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ಗಾವಣೆ ನಡೆದಿದೆ. ಠಾಣೆಯಲ್ಲಿ ಐದು ಹತ್ತು ವರ್ಷಗಳಿಂದ ಒಂದೆ ಕಡೆ ಟಿಕಾನಿ ಹೂಡಿದ ಪೊಲೀಸರ ಕೆಲಸವನ್ನು ಮತ್ತೆ ಬೇರೆ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುವದಿಲ್ಲವೇ ಎಂಬ ಯಕ್ಷಪ್ರಶ್ನೆ ಕಾಡುತ್ತಿದೆ. ಇನ್ನೂ ಕೆಲ ಪೊಲೀಸರು ರಿಕ್ವೆಷನ್ ಲೆಟರ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ. ಕೆಲ ಪೊಲೀಸರು ಮ್ಯೂಚುವಲ್ ವರ್ಗಾವಣೆ ಮಾಡಿಕೊಂಡಿದ್ದಾರೆ. ಅಂದರೆ ಪಾರದರ್ಶಕ ವರ್ಗಾವಣೆ ಆಗಬೇಕಾಗಿತ್ತು ಆದರೆ ಇಲ್ಲಿ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಪಾರದರ್ಶಕತೆ ಮರೆತು ವರ್ಗಾವಣೆ ಮಾಡಿದ್ದಾರೆ. ಕೆಲ ಪೋಲಿಸರಿಗೆ ಈ ವರ್ಗಾವಣೆಯಿಂದ ಪನಿಶ್ಮೆಂಟ್ ಆಗಿದೆ ಕೆಲ ಪೊಲೀಸರಿಗೆ ಅನುಕೂಲವಾಗಿದೆ, ಅಂದರೆ ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೆ ಒಂದು ನ್ಯಾಯ ಎಂಬಂತೆ ಈ ವರ್ಗಾವಣೆ ನಡೆದು ಹೋಗಿದೆ. ಈ ಆದೇಶ ಅಷ್ಟೊಂದು ಸಮಂಜಸವಲ್ಲ ಹೀಗಾಗಿ ಹಿರಿಯ ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮರು ಕೌಂನ್ಸಲಿಂಗ್ ಮಾಡಿ ಪಾರದರ್ಶಕತೆ ವರ್ಗಾವಣೆ ಮಾಡಬೇಕಾಗಿದೆ. ಈಗಾಗಲೇ ಈ ಕುರಿತು ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಗೃಹ ಸಚಿವರ ಆದೇಶ ಕೂಡಾ ಹೊರಡಿಸಿದ್ದಾರೆ. ಆದರೆ 5 ವರ್ಷಗಳ ಸೇವೆಯನ್ನು ಒಂದೇ ಸ್ಥಳದಲ್ಲಿ ಪೂರೈಸಿರುವ ಪಿ.ಸಿ. ಹೆಚ್.ಸಿ ಮತ್ತು ಎ.ಎಸ್.ಐ ರವರುಗಳ ವರ್ಗಾವಣೆ ಕುರಿತು.
ಉಲ್ಲೇಖ: ಸರ್ಕಾರದ ಆದೇಶ
ಸಂಖ್ಯೆ:
ಎಲ್ಲಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ, ಹೆಚ್.ಸಿ, ಎಎಸ್ಐ ರವರುಗಳ ಕನಿಷ್ಠ ಮತ್ತು ಗರಿಷ್ಟ ಅವಧಿಯನ್ನು ನಿಗಧಿಪಡಿಸಿ ವರ್ಗಾವಣೆಗಳನ್ನು ಮಾಡಬೇಕೆಂದು ನಿರ್ಧಿಷ್ಟ ಪಡಿಸಲಾಗಿರುತ್ತದೆ. ಆದಾಗ್ಯೂ ಹಲವಾರು ಘಟಕಗಳಲ್ಲಿ ಸಿಬ್ಬಂದಿಗಳು ಒಂದೇ ಸ್ಥಳ/ ಠಾಣೆಯಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು ಮತ್ತು ವರ್ಗಾವಣೆ ನಂತರ ಪುನಃ ಅದೇ ಠಾಣೆಗಳಿಗೆ ಓಓಡಿ ಆಧಾರದ ಮೇಲೆ ಸ್ಥಳನಿಯುಕ್ತಿಗೊಳಿಸುತ್ತಿರುವುದು ಕಂಡು ಬಂದಿರುತ್ತದೆ.
ಆದ್ದರಿಂದ ದಿನಾಂಕ: 06.07.2024 25 ರಂದು _ ನಡೆದ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಸೂಚನೆಯನ್ವಯ ತಮ್ಮ ಘಟಕಗಳಲ್ಲಿ ಒಂದೇ ಸ್ಥಳ/ಠಾಣೆಗಳಲ್ಲಿ 5 ವರ್ಷ ಸೇವೆ ಸಲ್ಲಿಸಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯವರೆಗಿನ ಅಧಿಕಾರಿ/ಸಿಬ್ಬಂದಿಗಳನ್ನು ಕೂಡಲೇ ಬೇರೆ ಠಾಣೆ/ ಸ್ಥಳಗಳಿಗೆ ಬದಲಾವಣೆ ಮಾಡಲು ಮತ್ತು ಯಾವುದೇ ಕಾರಣಕ್ಕೂ ಅಂತಹ ಸಿಬ್ಬಂದಿಗಳನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸತಕ್ಕದ್ದಲ್ಲ ಎಂದು ಈ ಮೂಲಕ ತಿಳಿಸಲಾಗಿದೆ ಹಾಗೂ ಈ ಕುರಿತಂತೆ ಕೈಗೊಂಡ ಕ್ರಮದ ಮಾಹಿತಿಯನ್ನು 7 ದಿನಗಳ ಒಳಗಾಗಿ ಈ ಕಛೇರಿಗೆ ಕಳುಹಿಸುವಂತೆ ಸೂಚಿಸಲಾಗಿದೇ ಎಂದು ಆದೇಶ ಇದೆ ಆದರೆ ಈ ಸೂಚನೆ ಮೇರೆಗೆ ವರ್ಗಾವಣೆಯಾಗಿಲ್ಲ ಈ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದಂತಾಗಿದೆ. ಈ ವರ್ಗಾವಣೆ ಸರಿಪಡಿಸಿ ಎಲ್ಲರಿಗೂ ಒಂದೆ ಕಾನೂನು ಅನ್ವಯವಾಗಲಿ, ಇನ್ನೂ ಬೆಳಗಾವಿ ಜಿಲ್ಲೆಯ ಪೊಲೀಸ್ ಕಾನ್ಸ್ಟೇಬಲ್ ಹೆಡ್ ಕಾನ್ಸ್ಟೇಬಲ್ ಎ ಎಸ್ ಐ ವರ್ಗಾವಣೆಯನ್ನು ಉತ್ತರ ವಲಯ ಐ ಜಿ ಪಿ ಗಮನಿಸಿ ಪಾರದರ್ಶಕ ವರ್ಗಾವಣೆ ಮಾಡಬೇಕಿದೆ.ಇನ್ನೂ ನ್ಯಾಯ ಕೊಡಿಸುವ ಪೊಲೀಸರಿಗೆ ಹಿರಿಯ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಅಲಗೆಷನ್ ಮಾಡಲು ಹೆದರುತ್ತಾರೆ, ನೌಕರಿ ಮಾಡಿದ್ರೆ ಸಾಕು ಎಂದು ಸುಮ್ಮನೆ ಇದ್ದು ಬಿಡುತ್ತಾರೆ, ಹೀಗಾಗಿ ಕೋರ್ಟ್ ಮೊರೆ ಹೋಗಲು ಹಿಂಜರಿಯುತ್ತಾರೆ. ಹೀಗಾಗಿ ಮೇಲಾಧಿಕಾರಿಗಳು ಸರಿಪಡಿಸಿ ಮತ್ತೊಮ್ಮೆ ಕೌಂನ್ಸಲಿಂಗ್ ಮಾಡಿ ವರ್ಗಾವಣೆ ಮಾಡುತ್ತಾರೆಯೇ ಕಾದು ನೋಡಬೇಕಿದೆ. ವರದಿ ಬ್ರಹ್ಮಾಂನಂದ ಪತ್ತಾರ.