ನಿಪಾನಾಳ:ಕಿರಾಣಿ ವ್ಯಾಪಾರದಲ್ಲಿ ಹೊಟ್ಟೆಕಿಚ್ಚು ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ,ಆರೋಪಿಗಳು ಪರಾರಿ.ರಾಯಬಾಗ ತಾಲೂಕಿನ ಸಮೀಪದ ನಿಪನಾಳ ಗ್ರಾಮದಲ್ಲಿ ಕಿರಾಣಿ ವ್ಯಾಪಾರ ಹೆಚ್ಚಾಗುತ್ತಿದ್ದದ್ದನ್ನ ನೋಡಿ ಬಾಜುಗೆ ಇರುವ ಓರ್ವ ಕಿರಾಣಿ ಅಂಗಡಿ ಮಾಲೀಕ ಸೇರಿ ನೂತನವಾಗಿ ಪ್ರಾರಂಭ ಮಾಡಿರುವ ಕಿರಾಣಿ ಮಾಲೀಕನ ತಂದೆ ಹಣಮಂತ ತಳವಾರ ಎಂಬುವನ್ ಮೇಲೆ ನಮ್ಮ್ ವ್ಯಾಪಾರ ಕಡಿಮೆ ಮಾಡಿದ್ದಿ ನಿ ನಿನ್ನ ಅಂಗಡಿಗೆ ಬೆಂಕಿ ಹತ್ತಲಿ ನಿ ರೋಗ ಬಂದು ಸಾಯಲಿ ಎಂದು ಹೀಗೆ ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ಬೆಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.ಹೊಸದಾಗಿ ಕಿರಾಣಿ ಅಂಗಡಿ ಇಟ್ಟಿದ್ದರಿಂದ, ಹೊಟ್ಟೆ ಕಿಚ್ಚು ಪಟ್ಟು, ತನ್ನ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಬೆಳ್ಳಂ ಬೆಳಗ್ಗೆ 6:30 ಸುಮಾರಿಗೆ, A1ಪಾರ್ವತಿ ಪಾಟೀಲ, A2 ಸೆಟ್ಟಪ್ಪ ತಳವಾರ, A3 ಸುನಿಲ ತಳವಾರ A4 ಲಿಂಬೆವ್ವಾ ಸೆಟ್ಟಪ್ಪ ತಳವಾರ ಅವರಿಂದ ಹಣುಮಂತ ತಳವಾರ ಇವರ ಮೆಲೆ ಕಲ್ಲು ಕಟ್ಟಿಗೆಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಇನ್ನು ಈ ಘಟನೆಯಲ್ಲಿ ಬಡಿಗೆ, ಹಾಗು ಕಲ್ಲಿನಿಂದ ಜಜ್ಜಿ ಹಲ್ಲೆ ನಡೆಸಿದ್ದರಿಂದ ಹಣಮಂತ ತಳವಾರ ಇವರಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಆ ಕೂಡಲೇ ಗಾಯಗೊಂಡಿದ್ದ ಹಣಮಂತ ನನ್ನು ಚಿಕಿತ್ಸೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇನ್ನೂ ಈ ಕುರಿತು ಹಲ್ಲೆಕೋರರ ಮೇಲೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,190/2025 : ಕಲಂ352, 351(3), 115(2), 109(1) ಸಹ ಕಲಂ 3(5) ಬಿ.ಎನ್.ಎಸ್ ಕಾಯ್ದೆ-2023 ಮತ್ತು ಕಲಂ ; 3(1) 3(1)(2), 3(2)(ವಿ ಎ ) 2.2/2. ಕಾಯ್ದೆ 1989 ತಿದ್ದುಪಡಿ ಕಾಯ್ದೆ-2015.ಈ ಅಡಿಯಲ್ಲಿ ದೂರು ದಾಖಲಾಗಿದ್ದು. ಆರೋಪಿಗಳು ಪರಾರಿಯಾಗಿದ್ದು ಪೋಲಿಸರು ಹಲ್ಲೆಕೋರರನ್ನ ಬಂದಿಸುವಲ್ಲಿ ಜಾಲ ಬಿಸಿದ್ದಾರೆ.ಕುತಂತ್ರ ಬುದ್ದಿ ಎಂದರೆ ಕೌಂಟರ್ ಕೇಸ್ ಕೊಡಲು ಹರಾಸಾಹಸ ಮಾಡಿ ಹಲ್ಲೆಕೋರರು ಪೇಚಿಗೆ ಸಿಲುಕಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಕಾಣಬಹುದು,ವರದಿ ಬ್ರಹ್ಮಾಂನಂದ ಪತ್ತಾರ.
ನಿಪಾನಾಳ:ಕಿರಾಣಿ ವ್ಯಾಪಾರದಲ್ಲಿ ಹೊಟ್ಟೆಕಿಚ್ಚು ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ,ಆರೋಪಿಗಳು ಪರಾರಿ
[td_block_social_counter facebook="tagdiv" twitter="tagdivofficial" youtube="tagdiv" style="style8 td-social-boxed td-social-font-icons" tdc_css="eyJhbGwiOnsibWFyZ2luLWJvdHRvbSI6IjM4IiwiZGlzcGxheSI6IiJ9LCJwb3J0cmFpdCI6eyJtYXJnaW4tYm90dG9tIjoiMzAiLCJkaXNwbGF5IjoiIn0sInBvcnRyYWl0X21heF93aWR0aCI6MTAxOCwicG9ydHJhaXRfbWluX3dpZHRoIjo3Njh9" custom_title="Stay Connected" block_template_id="td_block_template_8" f_header_font_family="712" f_header_font_transform="uppercase" f_header_font_weight="500" f_header_font_size="17" border_color="#dd3333"]